ಆಬ್ಲೊಮಾನ್
	ರಷ್ಯನ್ ಕಾದಂಬರಿಕಾರ ಗಾನ್ ಜಾರಾಫನ್‍ನ ಮಹಾಕೃತಿ (1858). ಇದರ ನಾಯಕ ಉನ್ನತ ಮೌಲ್ಯಗಳು, ಸೌಜನ್ಯಗಳಿದ್ದರೂ ಕ್ರಿಯಾಶಕ್ತಿ ದೃಢಮನಸ್ಸುಗಳಿಲ್ಲದೆ ನಿಷ್ಪ್ರಯೋಜಕ ವ್ಯಕ್ತಿಗಳ ಪ್ರತಿನಿಧಿಯಾಗಿದ್ದಾನೆ. ನಾಲ್ಕು ಭಾಗಗಳಿರುವ ಈ ಕೃತಿಯ ಕಡೆಯ ಎರಡು ಭಾಗಗಳ ಗಾಢವಿಷಾದ ರಷ್ಯನ್ ಸಾಹಿತ್ಯದಲ್ಲಿ ಸಹ ಅಸಮಾನವಾದುದು. ಈ ಕೃತಿಯಲ್ಲಿ ಗಾನ್ ಚಾರಾಫ್‍ನ ವಿಧಾನ ವಾಸ್ತವಿಕತೆ, ನಾಯಕನ ವಿಷಯದಲ್ಲಿ ತಿರಸ್ಕಾರ ಉಂಟಾಗದೆ ಅನುಕಂಪ ಉಂಟಾಗುವಂತೆ ಮಾಡಿರುವುದು ಇಲ್ಲಿನ ಅದ್ಭುತ ಸಾಧನೆ.											
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ